ಸೋಮವಾರ, ಮಾರ್ಚ್ 30, 2015

ಎಸ್.ಎಸ್.ಎಲ್.ಸಿ ಗ್ರೂಪ್ ಫೋಟೋ

ಪ್ರಸಕ್ತ ವರ್ಷದ ಎಸ್.ಎಸ್.ಎಲ್.ಸಿ ಗ್ರೂಪ್ ಫೋಟೋ....
ಎಲ್ಲರಿಗೂ ಶುಭವಾಗಲಿ

ಶುಕ್ರವಾರ, ಡಿಸೆಂಬರ್ 12, 2014

ನಮ್ಮ ಶಾಲೆ ಸಾಧಕ

ನಮ್ಮ ಶಾಲೆ ಸಾಧಕ ಮೋಹನ ಮಾಧೂಸಾ ಮೇರ್ವಾಡೆ. ಕಳೆದ ಮೂರುವರೆ ವರುಷದಿಂದ ನನಗೆ ಬಂದ ಕೀರುತಿಗೆ ಈತನೂ ಕಾರಣರೇ. ಮೂರುಭಾರಿ ರಾಜ್ಯಮಟ್ಟಕ್ಕೆ ನನ್ನ ಮಕ್ಕಳು ಆಯ್ಕೆ ಆಗಲು ಇವರು ಕಾರಣರು. ಆಕಾಶವಾಣಿಯಲ್ಲಿ ಮೂರುಬಾರಿ ಕಾರ್ಯಕ್ರಮ ನೀಡಲು ಇವರೂ ಕಾರಣರು. ಇತ್ತೀಚೆಗೆ ನನ್ನಗಲಿ ಇವರು ತೆರಳಿದರು. ವರ್ಗಾವಣೆಯೆಂಬ ವರುಷದ ಮಾಯಾವಿಯಿಂದ ಈ ಸಂದರ್ಭ ಸೃಷ್ಠಿಯಾಯ್ತು. ಕಾಕತಾಳೀಯ!! ಇದೇ ದಿನ ನನ್ನ ಸಾರಥಿಯಾಗಿ ಸುರೇಶ್ ರನ್ನು ನಾ ಪಡೆದೆ. ಇದೂ ಸಹ ಅದೇ ಮಾಯಾವಿ ಕೃಪೆ....


ಶುಕ್ರವಾರ, ಜನವರಿ 3, 2014

ಮಂಗಳವಾರ, ಜೂನ್ 4, 2013

ಕೃಪೆ ತೋರು ಶಾರದೆ....

ಶಾರದ ಪೂಜೆ

ಬಿಇಓರಿಂದ ಶಾರದೆ ಪೂಜೆ

ಪೂಜೆಯಲ್ಲಿ ವಿದ್ಯಾರ್ಥಿಗಳು


ಪೂಜೆಯಲ್ಲಿ ವಿದ್ಯಾರ್ಥಿನಿಯರು

ಬಿಇಓ : ಎಸ್.ಎಸ್.ಎಲ್.ಸಿ ಮಕ್ಕಳು ಹೇಗೆ ???
ವಿಪಿ : ಚೆನ್ನಾಗಿ ತಯಾರಿ ಮಾಡಿದ್ದೀವಿ ಸರ್...

ಕಳೆದ ವರ್ಷಎಸ್.ಎಸ್.ಎಲ್.ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಸನ್ಮಾನಿತರು : ಬಸವರಾಜು, ಚಂದನ.ಬಿ.ಎಸ್., ಅನೂಷಾ

ಅತಿಹೆಚ್ಚು ಹಾಜರಾತಿ ಪಡೆದ ವಿದ್ಯಾರ್ಥಿನಿಗೆ ಬಹುಮಾನ

ಕ್ರೀಡಾಸಾಧಕರಿಗೆ ಬಹುಮಾನ

ಕ್ರೀಡಾ ಕಿಶೋರಿಯರಿಗೆ ಸನ್ಮಾನ
 

ಬುಧವಾರ, ಫೆಬ್ರವರಿ 27, 2013

ನೀವು ಬನ್ನಿ, ನಮ್ಮ ವಿದ್ಯಾರ್ಥಿಗಳನ್ನು ಕರೆ ತನ್ನಿ

ಪ್ರಿಯರೆ,

ನಾನು ನಿಮ್ಮ ಶಾಲೆ. ನನಗೀಗ 60ರ ಹರೆಯ. ನಿಮ್ಮ ಪ್ರೀತಿ, ನಿಮ್ಮ ಹಾರೈಕೆ, ನಿಮ್ಮ ವಿಶ್ವಾಸದಿಂದಲೇ ನಾ ಆರು ದಶಕ ಪೂರಿಸಿದ್ದೇನೆ. ಈ ಸವಿ ನೆನಪನ್ನು ವಜ್ರಮಹೋತ್ಸವ  ಎಂದು ಆಚರಿಸಲು ಹೊರಟಿದ್ದಾರೆ. ಆ ಮೂಲಕ ನನಗೆ ಷಷ್ಠ್ಯಬ್ದಿ ಮಾಡಲು ಮನಸು ಮಾಡಿದ್ದಾರೆ ನನ್ನಂಗಳದಲ್ಲಿ ಅಕ್ಷರ ಕಲಿತ ಅನೇಕರು ಇದರ  ಉಸ್ತುವಾರಿ ಹೊತ್ತಿದ್ದಾರೆ.

ನಿಮ್ಮ  ಆಟ
ನಿಮ್ಮ ಪಾಠ
ಆ ತುಂಟಾಟ
ಈ ಕಣ್ಬೇಟ
ಮತ್ತೊಮ್ಮೆ ಕಾಣ ಬಯಸಿದ್ದೇನೆ.  ನಿಮ್ಮನ್ನೆಲ್ಲ ನೋಡ ಬೇಕೆಂದಿದ್ದೇನೆ. ಇದೇ ತಿಂಗಳ 01/03/2013 ರಂದು ಈ ಕಾರ್ಯಕ್ರಮ. ನನ್ನ ವಿವೇಕ ವೇದಿಕೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದೆ. ನೀವು ಬನ್ನಿ, ನಮ್ಮ ಹಳೆಯ ವಿದ್ಯಾರ್ಥಿಗಳನ್ನು ಕರೆ ತನ್ನಿ.

ನಿಮಗಾಗಿ ಕಾಯುತ್ತಿರುವ
-ಶ್ರೀ ಸಿದ್ದಣ್ಣಶೆಟ್ಟರ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ರಾವಂದೂರು.

ಶುಕ್ರವಾರ, ಮೇ 6, 2011

ಸ್ವ'ಗತಕಾಲ'

 
ಬಾಗಿಲೊಳು ಕೈ ಮುಗಿದು...

ನಮಸ್ಕಾರ.
ನನ್ನ ಹೆಸರು ಅಕ್ಷರ ಲೋಕ. ನನ್ ಹುಟ್ಟೂರು ರಾವಂದೂರು. ಇದಿರೋದು ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಲ್ಲಿ. ಹೋಬಳಿ ಕೇಂದ್ರ. ವಿಶಾಲ ಮೈದಾನದ ಹಸಿರು ಚಪ್ಪರಗಳಡಿಯಲ್ಲಿ ಕಳೆದ ಆರು ದಶಕಗಳಿಂದ ಇಲ್ಲಿದ್ದೀನಿ. 1953 ನನ್ನ  ಜನ್ಮವರ್ಷ. ಅಂದಿನಿಂದ ಇಂದಿನವರೆಗೆ ಅದೆಷ್ಟು ಜನ ಶಿಷ್ಯಂದಿರು ? ಅದೆಷ್ಟು ಜನ ಗುರುವರ್ಯರು ? ಅದೆಷ್ಟು ಹಿತೈಷಿಗಳು ? ಅದೆಷ್ಟು ಜನ ಸ್ನೇಹಿತರು ? ಸಹೃದಯಿಗಳು ! ನನ್ನ ಹಿತಕಾಯ್ದಿದ್ದಾರೆ. ನನಗೆ ಕೀರ್ತಿ ಕಿರೀಟ ತೊಡಿಸಿದ್ದಾರೆ. ಅವರಿಗೆಲ್ಲಾ ಕೃತಜ್ಞತೆ ಹೇಳಲೇಬೇಕೆನ್ನಿಸಿದೆ. ಅದಕ್ಕಾಗಿ ಈ ರೂಪ. ಸ್ನೇಹಿತರೇ ನಿಮಗೆಲ್ಲಾ ನನ್ನ ಎದೆತುಂಬಿದ ನಮಸ್ಕಾರ.

ಸ್ಕೂಲ್ ಮುಖಿ
 ನಿಮ್ಗೆಲ್ಲಾ ಗೊತ್ತಾಗಿದೆ, ನನ್ನ ಹೆಸರು ಅಕ್ಷರಲೋಕ ಅಂತ.ನನ್ನದು ಅಕ್ಕರೆ ಅಂಗಳ. ಪ್ರೀತಿಯ ಪರಿಪಾಠ ನನ್ನದು. ಇದಕ್ಕೆ ಸಾಕ್ಷಿ ಕಳೆದ 1960-70ರ ದಶಕದ ಸವಿನೆನಪುಗಳು. ಅಂದು ಓದಿರಲಿ, ಕುಣಿತವಿರಲಿ, ಆಟವಿರಲಿ, ನೋಟವಿರಲಿ,... ಎಲ್ಲದರಲ್ಲೂ ನಾನೇ ಮೊದಲು. ``ರಾವಂದೂರು ಹೈಸ್ಕೂಲು'' ಅಂದ್ರೆ ಸಿಕ್ಕಾಪಟ್ಟೆ ಫೇಮಸ್ಸು. ಜಿಲ್ಲೆಯಲ್ಲೇ ಒಳ್ಳೆ ಹೆಸರಿತ್ತು. ಅಂದರೆ ಈಗ ಇಲ್ಲವೆಂದಲ್ಲ. ಇದೆ. ಆದರೆ ಅಷ್ಟಿಲ್ಲ. ಕಾಲಗರ್ಭದೊಳಗೆ ವಿಲವಿಲ ಅನ್ನುತ್ತಿದೆ. ಏಕೆಂದ್ರೆ, ನನಗೂ ವಯಸ್ಸಾಗಿದೆ(58). ಹಲ್ಲು ಉದುರಿವೆ(ಕೊಠಡಿಗೋಡೆ ಬಿರುಕು). ಮೈ ಸುಕ್ಕುಗಟ್ಟಿದೆ(ಆರ್ಸಿಸಿ ಕುಸಿತ). ಕಣ್ಣು ಮಂಜಾಗಿದೆ(ದಾಖಲೆಗಳಿಗೆ ಗೆದ್ದಲು). ನೋಟ ಕಳೆಗುಂದಿದೆ( ದುರಸ್ತಿಗೆ ಹಾತೊರೆ). ಈಗೆನಗೆ ವೃದ್ಧಾಪ್ಯಕಾಲ. ಆದರೇನು ?


ಹೈಕ್ಲಾಸ್ ಹಜಾರ
 ನನ್ನ ಕುಟುಂಬ ದೊಡ್ಡದು. ಈಗದಕೆ ಹೊಸ ಯಜಮಾನನ ಆಗಮನ. ಇನ್ನೂ ತರುಣ ಆತ. ಅವನಿಗೆ ಸಾಧಿಸುವ ಛಲವಿದೆ. ಛಲಕ್ಕೆ ತಕ್ಕ ಮನಸೂ ಇದೆ. ಒಳ್ಳೆ ಮನಸಿಗೆ  ಒಳ್ಳೆ ಮನುಷ್ಯರ ಬೆಂಬಲವೂ ಇದೆ. ಈ ಬೆಂಬಲವೇ ನನಗೆ ಬೆನ್ನೆಲುಬು. ಗತಿಸಿಹೋದ ಸುವರ್ಣಕಾಲ ಮತ್ತೆ ಬರುವ ಆಶಾಭಾವ. ಈ ಭವದ ಭಾವಕ್ಕೆ ನನ್ನ ಸ್ನೇಹಿತರು ನೀವು ಜೀವ ತುಂಬಿ. ನನ್ನ ಶಿಷ್ಯೋತ್ತಮರನೇಕರಿದ್ದೀರಿ. ನನ್ನ ಕಡೆಗೊಮ್ಮೆ ನೋಡಿ. ನೀವು ಈ ಹಿರಿಯಜ್ಜನ ಕೈ ಹಿಡಿಯಿರಿ. ಸಂಜೆಗಣ್ಣ  ಹಿನ್ನೋಟಕೆ ಮುನ್ನುಡಿ ಬರೆವವರು ನೀವಲ್ಲವೇ ? ನಿಮ್ಮಲ್ಲಿ  ಆ ಶಕ್ತಿ ಇದೆ. ಅದು ವ್ಯರ್ಥವಾಗದಿರಲಿ. ಕಡೆಗಣ್ಣ ಕುಡಿನೋಟ ನಿಮ್ಮಜ್ಜ ಮೇಷ್ಟ್ರಿನ ಮೇಲಿರಲಿ.  


ಕಾಲವಾವನ ಕೀಳುಮಾಡದು

ನಾನೊಂದು ಸ್ಥಾವರ.
ನನಗೆ ಜಂಗಮರೂಪ.
ಜಗದಜಂಗಮಿಗೊಬ್ಬ ಸಾರಥಿ.
ಸಾರಥಿಗೆ ಸಾರ್ಥಕ ಸುಪುತ್ರರು.
ಪುತ್ರರತ್ನಗಳಿಗೆ ಹತ್ತಾರು ಭಂಟರು.
ಅವರೂ ನನ್ನ ನಂಟರು.
ಇದು ಅಂಟಿದ ನಂಟು.
ಈ ನಂಟಿನ ಕೊನೆ ಬಲ್ಲವರಾರು ?